ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು ( ayurvedic treatment for sleep kannada )

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು ( ayurvedic treatment for sleep kannada )

ಮನುಷ್ಯನು ಆರೋಗ್ಯವಾಗಿರಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಬೇಕು . ನಿದ್ರಾಹೀನತೆಯು ದೇಹದ ಶಕ್ತಿಗುಂದಿಸಿ, ಮನಸ್ಸನ್ನು ಅಸಂತುಲಿತಗೊಳಿಸುತ್ತದೆ . ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ , ಲೈಂಗಿಕವಾಗಿಯೂ ಬಲಹೀನನನ್ನಾಗಿಸುತ್ತದೆ . ಸುಖ ನಿದ್ರೆಗಾಗಿ ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳನ್ನು ಉಲ್ಲೇಖಿಸಿದ್ದಾರೆ .

ನಿದ್ರಾಹೀನತೆ ಎಂದರೇನು ? (insomnia meaning in kannada)

insomnia meaning in kannada, ayurvedic treatment for sleep kannada, sleep problems kannada, sleep well in kannada, sleeping tips kannada, nidre baralu yenu madabeku

ನಿದ್ರಾಹೀನತೆ ಗೆ ಇಂಗ್ಲೀಷ್ ನಲ್ಲಿ  ಇನ್ಸೋಮ್ನಿಯಾ (insomnia)  ಎನ್ನುತ್ತಾರೆ . ನಿದ್ರಾಹೀನತೆ ಎಂದರೆ ಸುಖವಾಗಿ ನಿದ್ರೆ ಮಾಡುವುದಕ್ಕೆ ಆಗದಿರುವುದು. ಕೆಲವರಿಗೆ ನಿದ್ರೆಯೇ ಬಾರದು . ಮತ್ತೆ ಕೆಲವರಿಗೆ ನಿದ್ರೆಯ ಮಧ್ಯದಲ್ಲಿ ಎಚ್ಚರವಾಗಿ ಮತ್ತೆ ನಿದ್ರಿಸಲಾಗದಿರುವುದು. ಇದರಿಂದ ಮರುದಿನ ಬೆಳಗ್ಗೆ ಎದ್ದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಬಳಲಿಕೆ ಕಂಡುಬರುವುದು. ಬೆಳಗ್ಗೆ ಬಹಳ ಮುಂಚಿತವಾಗಿ ಏಳುವುದೂ ನಿದ್ರೆಯ ಅಭಾವದ ಲಕ್ಷಣವೇ .

ಸುಖವಾದ ನಿದ್ರೆಯ ಲಾಭದಾಯಕ ಪರಿಣಾಮಗಳು.

insomnia meaning in kannada, ayurvedic treatment for sleep kannada, sleep problems kannada, sleep well in kannada, sleeping tips kannada, nidre baralu yenu madabeku

 1. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .
 2. ಖಿನ್ನತೆ, ಒತ್ತಡ  ಹಾಗು ಆತಂಕಗಳನ್ನು ದೂರ ಮಾಡುತ್ತದೆ .
 3. ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ .
 4. ಗಂಡಸರಲ್ಲಿ ನಿಮಿರು ರೋಗವನ್ನು ಗುಣಪಡಿಸುತ್ತದೆ .
 5. ದೇಹದ ಅಂಗಾಂಶಗಳ ದುರಸ್ತಿ ನಿದ್ರೆಯಲ್ಲೇ ಆಗುತ್ತದೆ .
 6. ದೇಹಕ್ಕೆ ಕಸುವನ್ನು ನೀಡಿ , ಬಲವನ್ನು ವೃದ್ಧಿಸುತ್ತದೆ .
 7. ಚರ್ಮದ ಕಾಂತಿ ಹೆಚ್ಚುತ್ತದೆ.

ಅನಿದ್ರೆಯ ಕಾರಣಗಳು ( sleep problems kannada)

insomnia meaning in kannada, ayurvedic treatment for sleep kannada, sleep problems kannada, sleep well in kannada, sleeping tips kannada, nidre baralu yenu madabeku

ಕೆಲಸದ ಹಾಗು  ಕೌಟುಂಬಿಕ ಒತ್ತಡಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಮಾನಸಿಕ ದುಃಖ , ದೈಹಿಕ ನೋವು , ಕಟ್ಟಿದ ಮೂಗು, ಜ್ವರ , ಕೆಮ್ಮು ಮುಂತಾದವು ತಾತ್ಕಾಲಿವಾಗಿ ಅನಿದ್ರತೆಯನ್ನು ಉಂಟು ಮಾಡಬಹುದು. ಜಾಗ ಬದಲಾಗುವುದರಿಂದ, ಪ್ರಖರವಾದ ಬೆಳಕು , ಗಲಾಟೆ , ಅತಿಯಾದ ತಾಪಮಾನ , ವಿಮಾನ ಯಾನ , ಶಿಫ್ಟಿನಲ್ಲಿ ಕೆಲಸ ಮಾಡುವುದು ಇವೆಲ್ಲವೂ ನಿದ್ರೆಗೆ ಅಡ್ಡಿಮಾಡಬಹುದು.

ಬಹಳ ಹೊತ್ತಿನವರೆಗೆ ಟಿವಿ ನೋಡುವುದು , ಮಲಗಿಕೊಂಡು ಸ್ಮಾರ್ಟ್ ಫೋನ್ ವೀಕ್ಷಿಸುವುದು , ಮಲಗುವ ಮುನ್ನ ಅಧಿಕ ಆಹಾರ ಸೇವಿಸುವುದು , ಕಾಫಿ ಸೇವಾಸನೆ ಮಾಡುವುದು ಇವೆಲ್ಲವೂ ನಿದ್ರಾ ಹಾನಿ ಮಾಡುತ್ತವೆ . ಇವನ್ನೇ ಬಹಳ ಕಾಲದವರೆಗೂ ಮುಂದುವರೆಸಿದರೆ ನಿದ್ರಾಹೀನತೆಯು ಶಾಶ್ವತವಾಗಿ ಉಳಿಯುತ್ತದೆ .

ಕ್ಯಾನ್ಸರಿನ ಚಿಕಿತ್ಸೆಗಳಾದ  ಕಿಮೋಥೆರಪಿ ಹಾಗು  ವಿಕಿರಣ ಚಿಕಿತ್ಸೆ  ಸಹ ನಿದ್ರೆಗೆ ತಾತ್ಕಾಲಿಕವಾಗಿ ಮುಳುವಾಗಬಹುದು

ನಿದ್ರಾಹೀನತೆಯ ದುಷ್ಪರಿಣಾಮಗಳು 

 1. ಸರಿಯಾಗಿ ನಿದ್ರೆ ಮಾಡದಿದ್ದಾಗ ಅಜೀರ್ಣ ಉಂಟಾಗಿ ಮಲಭದ್ದತೆ ಉಂಟಾಗುವುದು (constipation).
 2. ಶರೀರದಲ್ಲಿ ನಿಶಕ್ತಿ ಹಾಗು ನೋವು ಕಾಣಿಸಿಕೊಳ್ಳುವುದು .
 3. ರೋಗ ನೀರೋಧಕ ಶಕ್ತಿ  ಕುಂದುವುದು .
 4. ಲೈಂಗಿಕ ಶಕ್ತಿ ಕುಗ್ಗುವುದು .
 5. ಕೆಲಸದ ಕಡೆ ಗಮನ ಹಾಗು ನೆನಪಿನ ಶಕ್ತಿ ಕಡಿಮೆಯಾಗುವುದು .
 6. ಗಂಡಸರಲ್ಲಿ ನಿಮಿರು ದೌರ್ಬಲ್ಯ ಪ್ರಾರಂಭವಾಗಬಹುದು.
 7. ವೀರ್ಯಾಣುಗಳ ಸಂಖ್ಯೆ ಕುಗ್ಗುವುದು.

ನಿದ್ರಾಹೀನತೆಗೆ ಆಯುರ್ವೇದ ಚಿಕಿತ್ಸೆಗಳು (sleeping tips kannada)

ಒಳ್ಳೆಯ ನಿದ್ರೆ ಉತ್ತಮ ಆರೋಗ್ಯಕ್ಕೆ ಕಾರಣ. ಇದನ್ನರಿತ ನಮ್ಮ ಆಚಾರ್ಯರು ಆಯುರ್ವೇದದಲ್ಲಿ ಸುಖವಾದ  ನಿದ್ರೆ ಬರಲು ಅನೇಕ ಚಿಕೆತ್ಸೆಗಳನ್ನು ಉಲ್ಲೇಖಿಸಿದ್ದಾರೆ .

 1. ವಾತ ದೋಷದ ಅಸುಂತಲನೆಯಿಂದ ನಿದ್ರೆಯು ಹ್ರಾಸವಾಗುತ್ತದೆ . ಆದ್ದರಿಂದ ಮೊದಲು ವಾತ ದೋಷವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. (Vata Balancing)
 2. ಆಹಾರದಲ್ಲಿ ಹಾಲು , ತುಪ್ಪ , ಮೊಸರು ಹಾಗು ಮಾಂಸದ ರಸ (ಸೂಪ್ ) ಇವನ್ನು ಸೇರಿಸಿಕೊಳ್ಳುವುದು ಒಳಿತು . ಮಧ್ಯಾನ್ಹದಲ್ಲಿ ಮೊಸರು ಹಾಗು ರಾತ್ರಿಯಲ್ಲಿ ಹಾಲು ಉಪಯೋಗಿಸಬೇಕು.
 3. ವಾರಕ್ಕೆ ಎರಡು ಬಾರಿಯಾದರೂ ಬೆಚ್ಚಗಿನ ಕ್ಷೀರಬಲಾ ತೈಲ ಅಥವಾ ಎಳ್ಳೆಣ್ಣೆ ಯನ್ನು ಶರೀರಕ್ಕೆ ಹಾಗು ತಲೆಗೆಹಚ್ಚಿ ಮಸಾಜ್ ಮಾಡಬೇಕು. ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು . ಕರಾವಳಿ ತೀರದಲ್ಲಿ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವ ಪದ್ಧತಿ ಇನ್ನೂ ಇದೆ.
 4. ರಾತ್ರಿ ನಿದ್ದೆ ಬಾರದಿದ್ದಲ್ಲಿಮಧ್ಯಾನ್ಹದಲ್ಲಿ ನಿದ್ರಿಸಬೇಡಿ. ಆದರೆ ವಯಸ್ಸಾದವರು , ಮಕ್ಕಳು , ರೋಗಿಗಳು , ಗರ್ಭವತಿಯರು , ಬಾಣಂತಿಯರು ಹಾಗು ಅತಿಯಾಗಿ  ದೇಹ ದಂಡಿಸುವವರು ಮಧ್ಯಾನ್ಹ ಮಲಗಬಹುದು.
 5. ಮಲಗುವ ಮುನ್ನ ಹದಿನೈದು ನಿಮಿಷ ಧ್ಯಾನ ಮಾಡುವುದರಿಂದ ಹಾಗು ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಿದ್ರೆ ಹಿತವಾಗಿ ಬರುತ್ತದೆ .
 6. ಆಯುರ್ವೇದ ದಿನಚರ್ಯದಲ್ಲಿ , ಉತ್ತಮ ಅರೋಗ್ಯ ಹಾಗು ನಿದ್ರೆಗಾಗಿಪ್ರತಿ ದಿನವೂ ವ್ಯಾಯಾಮ ಮಾಡಲೇ ಬೇಕೆಂದು ಉಲ್ಲೇಖಿಸಿದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ೪೫ ನಿಮಿಷಗಳ ಕಾಲ ವಾಕಿಂಗ್ ಹಾಗು ಅನ್ಯ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ಅಭ್ಯಾಸ.
 7. ಮಲಗುವ ಮುನ್ನ ಮೂರು ಗಂಟೆಗಳ ಮುಂಚೆ ಆಹಾರ ಸೇವಿಸಿ . ರಾತ್ರಿ ಕಾಫಿ ಅಥವಾ ಚಾ ಸೇವಿಸಬೇಡಿ. ಧೂಮಪಾನ ಹಾಗು ಮದ್ಯ ವ್ಯಸನಗಳಿಂದ ದೂರವಿರಿ .
 8. ರಾತ್ರಿ ಮಲಗುವ ಮುನ್ನ ಬಿಸಿಹಾಲಿಗೆ ತುಪ್ಪ ಮತ್ತು ಅರಿಶಿಣ ಬೆರೆಸಿ ಕುದಿಸಿ ಸೇವಿಸಿರಿ.
 9. ನಿಮ್ಮ ಮಲಗುವ ಕೋಣೆ ಸ್ವಚ್ಛವಾಗಿರಲಿ . ಅದನ್ನು ಮಲಗಲು ಮಾತ್ರ ಉಪಯೋಗಿಸಿ. ಈ ಕೋಣೆಯಲ್ಲಿ ಟಿವಿ ಅಥವಾ ಪೋನ್ಗಳನ್ನು ಇಡಬೇಡಿ.
 10. ಅಶ್ವಗಂಧ (Ashwagandha) , ಸರ್ಪಗಂಧ, ಗಸಗಸೆ , ಮುಂತಾದ ಮೂಲಿಕೆಗಳೂ ಒಳ್ಳೆಯ ನಿದ್ರೆ ಬರುವಲ್ಲಿ ಸಹಾಯ ಮಾಡುತ್ತವೆ . ಆದರೆ ಇವನ್ನು ಉಪಯೋಗಿಸುವ ಮೊದಲು ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ.

ಚೆನ್ನಾಗಿ ನಿದ್ರಿಸಿ ಉತ್ತಮ ಅರೋಗ್ಯ ಪಡೆಯಿರಿ.

Free Ayurvedic Consultation

Call us at  +91 9945995660 / +91 9448433911

Whats App + 91 6360108663/

ಲೈಂಗಿಕ ಶಕ್ತಿ ಹೆಚ್ಚಿಸುವ ಆಯುರ್ವೇದೀಯ ಚಿಕಿತ್ಸೆಗಳು

Increase Erection Kit

Ayurvedic Medicines to increase erection

Increase Libido Kit

ayurvedic medicine to increase libido

Increase Sperm Kit

Increase Sperm Count Kit

Diabetic vajikarana Therapy Combo

Vajikarana Therapy for Diabetic Men

Complete Vajikarana Therapy

Ayurveda Vajikarana therapy

Obesity and Erectile Dysfunction solution

Vajikarana Therapy for Obese Men

Premature Ejaculation Ayurvedic Remedy

Ayurvedic Medicine for ED and PE

Stallion Penis Massage Oil

Ayurvedic pennis massage oil

 

Rejuzoa Ayurvedic Capsules for Erectile Dysfunction

Ayurvedic capsules for Erectile dysfunction

Ashwagandha Capsules

Buy ashwagandha capsules online

Gokshura (tribulus) capsules

Buy gokshura Capsules

Vajikarana Rasayana

Vajikarana Rasayana for men

Supraja Lehya to Increase sperm count

Ayurvedic Indian Medicine to Increase Sperm Count

 Vajimix-Aphrodisiac Powder

 Vajimix-ayurvedic Aphrodisiac Powder

ನಿಮ್ಮದೊಂದು ಉತ್ತರ

Close Menu