ನಿಮಿರು ದೌರ್ಬಲ್ಯ ಸುಧೀರ್ಘ ವರ್ಣನೆ Erectile Dysfunction Explanation in Kannada
ನಿಮಿರು ದೌರ್ಬಲ್ಯ ಅಥವಾ ಲೈಂಗಿಕ ದೌರ್ಬಲ್ಯ ಪುರುಷರನ್ನು ಅಧೀರನ್ನಾಗಿಸುತ್ತದೆ . ಆದರೆ ಇದನ್ನು ತಡೆಯಲು ಹಲವಾರು ಸುಲಭ ಉಪಾಯಗಳಿವೆ .ಇವುಗಳನ್ನು ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿದುಕೊಳ್ಳೋಣ
ಗಂಡಸರಲ್ಲಿ ಜನನಾಂಗ ನಿಮಿರುವಿಕೆ ಶಾರೀರಿಕವಾದ ಕ್ರಿಯೆಯಾಗಿದೆ . ಹಲವಾರು ಕಾರಣಗಳಿಂದ ನಿಮಿರುವಿಕೆ ದುರ್ಬಲಗೊಳ್ಳುತ್ತದೆ. ಬಹಳಷ್ಟು ಜನ ಪುರುಷರು ಈ ತೊಂದರೆಯನ್ನು ವ್ಯಕ್ತಪಡಿಸಲಾಗದೆ ಮಾನಸಿಕವಾಗಿ ಬಳಲುತ್ತಾರೆ . ಇದರ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ