ನಿಮಿರು ದೌರ್ಬಲ್ಯ ಸುಧೀರ್ಘ ವರ್ಣನೆ Erectile Dysfunction Explanation in Kannada

ನಿಮಿರು ದೌರ್ಬಲ್ಯ ಸುಧೀರ್ಘ ವರ್ಣನೆ Erectile Dysfunction Explanation in Kannada

ಶಿಶ್ನದ ನಿಮಿರು ಗರ್ಭದಲ್ಲಿರುವ  ಶಿಶುವಿನಿಂದ ಆರಂಭವಾಗಿ ಮರಣದವರೆಗೂ ಹೇಗೆ ಮುಂದುವರಿಯುತ್ತದೆ ಎಂಬ ಸುಧೀರ್ಘ ಲೇಖನ ಡಾ ।। ಸಿ . ಮುರಳೀಧರ ಬರೆದಿರುತ್ತಾರೆ . ಇದರೊಡನೆ ನಿಮಿರು ದೌರ್ಬಲ್ಯದ (erectile dysfunction or Impotence) ಬಗ್ಗೆಯೂ ಈ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ .

Terminal Erection Meaning, erectile dysfunction meaning in kannada, ED in Kannada, Impotence in Kannada, ನಿಮಿರು ದೌರ್ಬಲ್ಯ

ಮೊದಲ ನಿಮಿರು

ಗರ್ಭದಲ್ಲಿರುವ ಶಿಶುವಿನ ಲಿಂಗವೂ ಸಹ ಹಲವಾರು ಬಾರಿ ನಿಮಿರುತ್ತಿರುತ್ತದೆ ಎಂದು ಅಲ್ಟ್ರಾ ಸೌಂಡ್ ನಿಂದ ಸಿದ್ಧಪಡಿಸಲಾಗಿದೆ.

Terminal Erection Meaning, erectile dysfunction meaning in kannada, ED in Kannada, Impotence in Kannada, ನಿಮಿರು ದೌರ್ಬಲ್ಯ

ಎಷ್ಟೋ ಸಲ ಶಿಶು ಜನನದ ಕೆಲವೇ ಕ್ಷಣಗಳ ಮೊದಲು ಸಹ ಲಿಂಗ ನಿಮಿರಿರುವುದು ಗಮನಕ್ಕೆ ಬಂದಿರುತ್ತದೆ. ಅಷ್ಟೇ ಅಲ್ಲ, ಗರ್ಭಸ್ಥ ಶಿಶು ತನ್ನ ನಿದ್ದೆಯಲ್ಲಿ , ( REM ) ರಾಪಿಡ್ ಐ ಮೂವ್ಮೆಂಟ್ ಸಮಯದಲ್ಲೂ ಗಂಟೆಗೆ ಒಂದು ಸಾರಿಗಿಂತ ಅಧಿಕ ಬಾರಿ ನಿಮಿರುವುವಿಕೆಯ ಅನುಭವವನ್ನು ಪಡೆಯುತ್ತದೆ ಎಂದು 1991ರಲ್ಲಿ ನಡೆದ ಸಮೀಕ್ಷೆ ತಿಳಿಸುತ್ತದೆ.

ಅಂದರೆ, ಶೋ ರೂಮಿನಿಂದ ವಾಹನ ವಿತರಣೆಗೆ ಮುಂಚೆ ಟೆಸ್ಟ್ ಡ್ರೈವ್ ಮಾಡಿ ನೋಡುವಂತೆ ನಮ್ಮ ದೇಹ ಸಹ ನೈಸರ್ಗಿಕವಾಗಿ ಪರೀಕ್ಷೆ ಮಾಡುತ್ತದೆ ಎಂದಾಯ್ತು. ಹಾಗಾಗಿ, ಶಿಶುಗಳು, ಮಕ್ಕಳು, ವಯಸ್ಕರ ಲಿಂಗ ನಿಮಿರಿದ್ದರೆ ಅದನ್ನು ತಪ್ಪು ತಿಳಿಯಬೇಡಿ. ಅದೊಂದು ನೈಸರ್ಗಿಕ ಪ್ರಕ್ರಿಯೆ ಎಂದುಕೊಳ್ಳಿ. ತಮಾಷೆ, ಲೇವಡಿ ಮಾಡಬೇಡಿ.

ಹಾಗಾದರೆ, ಅಂತಿಮ ನಿಮಿರುವಿಕೆ ಯಾವಾಗ?

ಅಂತಿಮ ನಿಮಿರು – Terminal Erection Meaning

ಏಂಜಲ್ ಲಸ್ಟ್ ಅಥವಾ ಟರ್ಮಿನಲ್ ಇರೆಕ್ಷನ್ ನಲ್ಲಿ ಸತ್ತ ಕೆಲವು ಕ್ಷಣಗಳಲ್ಲಿ ಈ ನಿಮಿರುವಿಕೆ ಕಂಡುಬರುತ್ತದೆ.

ಸಾಮಾನ್ಯವಾಗಿ ನೇಣು ಹಾಕಿಕೊಂಡವರಲ್ಲಿ ಈ ಪರಿಸ್ಥಿತಿಯನ್ನು ಗಮನಿಸಲಾಗಿದೆ.

ಸಣ್ಣ ಮೆದುಳಿನ ಮೇಲೆ ಬಿದ್ದ ಒತ್ತಡದಿಂದಾಗಿ ಈ ರೀತಿಯಾಗುತ್ತದೆಂಬುದು ವಿಜ್ಞಾನಿಗಳ ವಿವರಣೆ.

ಅದೇ ರೀತಿ, ಗುಂಡೇಟಿನಿಂದ ಸತ್ತವರು ಮತ್ತು ವಿಷಪ್ರಾಶನವಾದಾಗಲೂ ಸಹ ಈ ಲಕ್ಷಣವನ್ನು ಗಮನಿಸಲಾಗಿದೆ.

ಬಾಯಿ ತೆಗೆದುಕೊಂಡಿರುವ ಹೆಣ ಅಥವಾ ಕಣ್ಣು ತೆಗೆದುಕೊಂಡಿರುವ ಹೆಣವನ್ನು ನೋಡಿ ನಮ್ಮ ಅಜ್ಜಿ ಹೇಳುತ್ತಿದ್ದಳು ಅವನ ಜೀವ ಬಾಯಿಯಿಂದ ಹೋಗಿದೆ, ಕಣ್ಣಿನಿಂದ ಹೊರ ಹೋಗಿದೆ ಎಂದು.

ಹಾಗಾದರೆ ಈ ಹೆಣದ ಜೀವ…..?

Morning Wood ಅಥವಾ ಈ ‘ಮುಂಜಾವಿನ ಗುಡಾರ’

ಹೌದು, morning wood ಅಥವಾ ಈ ‘ಮುಂಜಾವಿನ ಗುಡಾರ’ ಕಂಡು ಗಾಬರಿಯಾಗ ಬೇಕಿಲ್ಲ. ಏಕೆಂದರೆ, ಗರ್ಭಸ್ಥ ಶಿಶುವಿನಾವಸ್ಥೆಯಿಂದ ಹಿಡಿದು ವೃದ್ದಾಪ್ಯದವರೆಗೂ ನಿದ್ರಾವಸ್ಥೆಯಲ್ಲಿ ಲಿಂಗದ ನಿಮಿರುವಿಕೆ ಪ್ರತಿನಿತ್ಯ ಮೂರರಿಂದ ಐದು ಬಾರಿ ಆಗುತ್ತಲೇ ಇರುತ್ತದೆ. ಶಿಶುಗಳಲ್ಲಿ ಮತ್ತು ವೃದ್ಧಾಪ್ಯದಲ್ಲಿ ಕಡಿಮೆಯೂ, ವಯಸ್ಕರಲ್ಲಿ ಅಧಿಕಬಾರಿಯೂ ಇರಬಹುದು.

Terminal Erection Meaning, erectile dysfunction meaning in kannada, ED in Kannada, Impotence in Kannada, ನಿಮಿರು ದೌರ್ಬಲ್ಯ

ಕಂಪ್ಯೂಟರಿನಲ್ಲಿ ಸೆಲ್ಫ್ ಫಿಕ್ಸಿಂಗ್ ಅಂದರೆ, ‘ಸ್ವಯಂ ರಿಪೇರಿ’ ವ್ಯವಸ್ಥೆ ಇರುವಂತೆ ನಮ್ಮ ಶಿಷ್ನಕ್ಕೆ ಇದೊಂದು ಸ್ವಯಂ ರಿಪೇರಿ ವ್ಯವಸ್ಥೆ. ಆ ಮೂಲಕ ಲಿಂಗದ ರಕ್ತನಾಳಗಳು ತುಂಬಿಕೊಂಡು, ಆಮ್ಲಜನಕದ ಸಾಂದ್ರತೆ ಅಧಿಕವಾಗಿ ಮಾಂಸ ಪೇಶಿಗಳು ಸಶಕ್ತಗೊಳ್ಳುತ್ತವೆ. ಹಗಲಿನಲ್ಲಿ ಗಂಡಿನ ರಕ್ತದಲ್ಲಿ ನೋರ್-ಅಡ್ರೆನೆಲಿನ್ ಅಂಶ ಅಧಿಕವಿರುವುದರಿಂದ ಅದು ಈ ಲಿಂಗದ ನಿರಂತರ ನಿಮಿರುವಿಕೆಯನ್ನು ತಪ್ಪಿಸುತ್ತದೆ. ರಾತ್ರಿಯ ಸಮಯದಲ್ಲಿ ಈ ಹಾರ್ಮೋನಿನ ಅಂಶ ಕಡಿಮೆಯಾದಾಗ ಲಿಂಗ ನಿಮಿರುತ್ತದೆ. ಏನ್. ಪಿ.ಟಿ ಅಂದರೆ ನಾಕ್ಟರ್ನಲ್ ಪಿನೈಲ್ ಟುಮಿಸಿನ್ ಸರಿಯಾಗಿದ್ದು ಲೈಂಗಿಕ ದೌರ್ಬಲ್ಯವಿದ್ದರೆ ಅದು ಮಾನಸಿಕ ಕಾರಣಗಳಿಂದ ಕೂಡಿರಬೇಕು ಮತ್ತು ನಿದ್ರಾವಸ್ಥೆಯ ನಿಮಿರುವಿಕೆ ಇಲ್ಲದಿದ್ದಲ್ಲಿ ದೈಹಿಕ ಕರಣಗಳದ ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದ್ರೋಗ ಅಥವಾ ರಕ್ತನಾಳಗಳಲ್ಲಿ ಅಡಚಣೆಯಿಂದಿರಬಹುದು.

ಶಿಶ್ನದ ಉದ್ದ ಹಾಗು ಅಗಲದ ಬಗ್ಗೆ

ಪ್ರತಿಯೊಬ್ಬ ಗಂಡಸು ತನ್ನ ಲಿಂಗದ ಉದ್ದಗಲದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿರುತ್ತಾನೆ. ಅದು ಇತರರ ಲಿಂಗಕ್ಕಿಂತಲು ಚಿಕ್ಕದ್ದೇನೋ, ತನ್ನ ಸಂಗಾತಿಯನ್ನು ತೃಪ್ತಿ ಪಡಿಸಲು ಈ ಆಯುಧ ಸಾಲದೇನೋ ಎಂಬಿತ್ಯಾದಿ ಅನುಮಾನಗಳು ಕಾಡುತ್ತಲೇ ಇರುತ್ತವೆ. ಅದರಲ್ಲೂ ನೀಲಿ ಚಿತ್ರಗಳನ್ನು ನೋಡಿದ್ದವರ ಪಾಡು ಹೇಳತೀರದು.

Terminal Erection Meaning, erectile dysfunction meaning in kannada, ED in Kannada, Impotence in Kannada, ನಿಮಿರು ದೌರ್ಬಲ್ಯ

ಮೇಲಿನಿಂದ ತನ್ನ ಲಿಂಗವನ್ನು ನೋಡಿಕೊಂಡು ಪಕ್ಕ (ವಾರೆ ನೋಟ)ದಿಂದ ಇತರರ ಲಿಂಗ ನೋಡಿದಾಗ ಬೇರೆ ಬೇರೆ ಕೋನದಲ್ಲಿ ಬೇರೆಯದೇ ಅಭಿಪ್ರಾಯ ಮೂಡುತ್ತದೆ.

ಒಬ್ಬನೇ ಸಂಗಾತಿಯ ಲಿಂಗವನ್ನು ನೋಡಿದ್ದು, ಅದನ್ನಷ್ಟೇ ಅನುಭವಿಸಿದ್ದ ಮಹಿಳೆಗೆ ಅದೇ ಸ್ವರ್ಗ, ಅದೇ ವೈಕುಂಠ, ಅದುವೇ ಕೈಲಾಸ. ಮಹಿಳೆಯರು ಸಂಗಾತಿಯ ಲಿಂಗದ ಉದ್ದಕ್ಕಿಂತ ಅಗಲದ ಬಗ್ಗೆ ಹೆಚ್ಚು ಒಲವು ಉಳ್ಳವರಾಗಿರುತ್ತಾರೆ. ಅದರಲ್ಲಿ ಸರಿಯಾಗಿ ತುಂಬಿಕೊಳ್ಳುವ ತರ್ಕವೂ ಅಡಗಿದೆ.

ಏಷಿಯಾ, ಯೂರೋಪ್, ಅಮೆರಿಕ, ಆಫ್ರಿಕಾ ಹೀಗೆ ಬೇರೆ ಬೇರೆ ಜನಾಂಗೀಯ ವ್ಯಕ್ತಿಗಳಲ್ಲಿ ಬೇರೆ ಬೇರೆ ಅಳತೆಯ ಲಿಂಗಗಳಿರುತ್ತವೆ. ಆದರೂ, ಐದರಿಂದ ಏಳು ಅಂಗುಲದ ಲಿಂಗ ಸರಿಯಾದ ಅಳತೆಯದಾಗಿದ್ದು ಅದಕ್ಕಿಂತ ಹೆಚ್ಚು ಅಥವಾ ಕಡಿಮೆಯಿದ್ದರೆ ತೊಂದರೆಯೇ. ಅಳತೆ ಮೀರಿ ಉದ್ಧವಿದ್ದರೆ ವೇದನಾಯುಕ್ತ ಲೈಂಗಿಕ ಕ್ರಿಯೆಗೆ ದಾರಿಯಾಗುವ ಸಾಧ್ಯತೆಯೇ ಹೆಚ್ಚು.

ವ್ಯಕ್ತಿಯ ಎತ್ತರಕ್ಕೂ, ವಯಸ್ಸಿಗೂ ಅವನ ಪಾದದ ಅಳತೆಗೂ,ಅವನ ತೋರ್ ಬೆರಳಿನ ಅಳತೆಗೂ ಹೋಲಿಸಿ ಅವನ ಲಿಂಗದ ಅಳತೆಗೆ ತಾಳೆಹಾಕಿದ ಎಲ್ಲ ಸಮೀಕ್ಷೆಗಳೂ ಈಗ ತಲೆಕೆಳಗಾಗಿವೆ.

ಅದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ, ಲಿಂಗದ ನಿಮಿರು ಪೂರ್ವದ ಅಳತೆಗೂ ನಿಮಿರಿದಾಗಿನ ಅಳತೆಗೂ ಯಾವುದೇ ಅನುಪಾತದ ಲೆಕ್ಕಾಚಾರವಿಲ್ಲ. ಅಂದರೆ, ಅತ್ಯಂತ ಚಿಕ್ಕದಾಗಿ ಕಾಣುವ ಲಿಂಗವು ನಿಮಿರಿದ ನಂತರ ಎರಡರೆಷ್ಟೋ, ಮೂರರಷ್ಟೋ ಆಗಬಹುದು ಅಥವಾ ಬಹಳ ದೊಡ್ಡದಾಗಿ ಕಾಣುವ ಶಿಶ್ನವು ನಿಮಿರಿದ ನಂತರ ಕೇವಲ ಕೆಲವು ಅಂಗುಲಗಳಷ್ಟೇ ವೃದ್ಧಿಸಲೂಬಹುದು.

ಲಿಂಗದೊಳಗಡೆ ಮೂಳೆ

ಪ್ರಜಾಮತ ವಾರಪತ್ರಿಕೆಯ ‘ಗುಪ್ತ ಸಮಾಲೋಚನೆ’ ಶೀರ್ಷಿಕೆಯಲ್ಲಿ ಅಥವಾ ಬೇರಾವುದೇ ಲೈಂಗಿಕ ಅಂಕಣಗಳಲ್ಲಿ ಪುರುಷರಿಂದ ಅತ್ಯಧಿಕವಾಗಿ ಕೇಳಲ್ಪಡುವ ಮೂರು ಪ್ರಶ್ನೆಗಳೆಂದರೆ 1.ಹಸ್ತಮೈಥುನ, 2.ಶೀಘ್ರಸ್ಖಲನ ಮತ್ತು 3.ಲಿಂಗ ಎಡಕ್ಕೆ ವಾಲಿದೆ. ಸಹಜ ಸ್ಥಿತಿಯನ್ನೂ ಸಹ ಅಸಹಜವೆಂದುಕೊಂಡಿರುವ ಪ್ರಶ್ನೆಗಳೇ ಅಧಿಕ. ಅದರಲ್ಲೂ, ಲಿಂಗ ಎಡಕ್ಕೆ ವಾಲಿದೆ ಎಂಬ ದೂರು ಸರ್ವೇ ಸಾಮಾನ್ಯ. ನೂರಕ್ಕೆ ನೂರರಷ್ಟು ನೇರವಾಗಿ ಆ ಆಯುಧವನ್ನು ಸಿಕ್ಕಿಸಲು ಸಾಧ್ಯವಾಗದೆ ದೇವರೇ ಹಾಗೆ ಮಾಡಿಟ್ಟಿದ್ದಾನೆ ಎಂದ ಮೇಲೆ ಚಿಂತೆ ಏಕೆ?

ಇನ್ನೊಂದು ಪ್ರಮುಖ ವಿಷಯವೇನೆಂದರೆ, ಲಿಂಗವು ಹೊರಗೆ ಅದೆಷ್ಟು ದೃಷ್ಟಿ ಗೋಚರಿವಿದೆಯೋ ಅಷ್ಟೇ ಉದ್ದ ದೇಹದ ಒಳಗೂ ಹುದುಗಿರುತ್ತದೆ. ಅದು, ನಿಮಿರಿದಾಗ ದೇಹದ ಒಳಗೂ ಅಷ್ಟೇ ಹಿಗ್ಗಿ, ದೃಢವಾಗಿ ಮೂತ್ರಕೋಶದ ದ್ವಾರದ ಮೇಲೆ ಒತ್ತಡ ಹಾಕುತ್ತದೆ. ಅಂದರೆ, ಈ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆ ಅಸಾಧ್ಯ.

ವೀರ್ಯಸ್ಖಲನದ ಸಮಯ ನಿಷ್ಕರ್ಷೆಯನ್ನು ಮಿದುಳಬಳ್ಳಿ ತೀರ್ಮಾನಿಸುವುದರಿಂದ ಪುರುಷನ ಬುದ್ಧಿವಂತಿಕೆ (ಮಿದುಳು) ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಪ್ರಕೃತಿಯ ಜಾಣ್ಮೆ ಎಂದರೆ ಇದೇ ಅಲ್ಲವೇ? ಆದರೆ, ಕಣ್ಣು ಮುಚ್ಚಿ ಲೈಂಗಿಕಕ್ರಿಯೆ ನಡೆಸುವ ಪುರುಷರಿಗಿಂತ ತೆರೆಗಣ್ಣಿನವರು ಶೀಘ್ರಸ್ಖಲನದಿಂದ ದೂರವೆಂದು ಒಂದು ಸಮೀಕ್ಷೆಯಿಂದ ದೃಢಪಟ್ಟಿದೆ.

ನಾವು ವಿದ್ಯಾರ್ಥಿಗಳಗಿದ್ದಾಗ ಉತ್ತರ ಕರ್ನಾಟಕದ ಲೇಖಕರೊಬ್ಬರು ಬರೆದ ಲೈಂಗಿಕ ಪುಸ್ತಕದ ಪ್ರಕಾರ ನಿಮಿರಿದ ಲಿಂಗದಲ್ಲಿ ಮೂಳೆ ಇರುತ್ತದೆಂಬ ವಾಕ್ಯವನ್ನು ಮತ್ತೆ ಮತ್ತೆ ಓದಿ ಲೇವಡಿ ಮಾಡುತ್ತಿದ್ದೆವು. ಆ ಲೇಖಕನ ಪ್ರಕಾರ ‘ಪ್ರಕುಪಿತವಾದ ವಾತವು ದೂಷಿತ ಕಫ ಮತ್ತು ಪಿತ್ತದೊಡಗೂಡಿ ಕಟಿ ಪ್ರದೇಶದಲ್ಲಿರುವ ಈ ಆಸ್ತಿಯನ್ನು ಅಧೋಮುಖವಾಗಿ ಸಂಚರಿಸುವಂತೆ ಮಾಡಿ ಲಿಂಗವನ್ನು ನಿಮಿರಿಸುತ್ತದೆ’. ಅದೆಷ್ಟು ಹಾಸ್ಯಾಸ್ಪದವಾದ ವಿವರಣೆ ಎನಿಸುತ್ತದೆ. ಪೂರ್ತಿ ನಿಮಿರಿದ ಲಿಂಗವನ್ನು ಸ್ಪರ್ಶಿಸಿದ ಸಾಮಾನ್ಯ ಸ್ತ್ರೀ,ಪುರುಷರು ಈ ವಾದವನ್ನು ಇಂದಿಗೂ ನಂಬುತ್ತಾರೆ.

ಆದರೆ, ನಿಮಿರಿದ ಲಿಂಗದ ಕಾರ್ಪಸ್ ಕೇವರ್ನೊಸವನ್ನು ಸುತ್ತುವರಿದ ಫೈಬರ್ ಒಡೆದು ಹೋದಾಗ ಆಸ್ತಿ ಭಗ್ನದಂತೆ ಲಿಂಗ ಭಂಗವಾಗಿರುವ ಅನೇಕ ಉದಾಹರಣೆಗಳಿವೆ. ಅಸಮಾನ್ಯವಾದ, ಅತ್ಯಂತ ಘರ್ಷಣೆಯಿಂದ ಕೂಡಿದ ಸಂಭೋಗದ ಸಮಯದಲ್ಲಿ ಯೋನಿಯಿಂದ ಹೊರ ಬಂದ ಲಿಂಗಕ್ಕೆ ಪೆಟ್ಟಾದಾಗ ಅಥವಾ ನಿಮಿರಿದ ಲಿಂಗದೊಡನೆ ಆಯತಪ್ಪಿ ಕೆಳಗೆ ಬಿದ್ದ ಪುರುಷರು ಈ ರೀತಿಯ ಭಗ್ನತೆಗೊಳಪಟ್ಟಿದ್ದಾರೆ. ಅದರಲ್ಲೂ, ಮಹಿಳೆ ಮೇಲಿರುವ ಸ್ಥಿತಿಯಲ್ಲಿ ಸಂಭೋಗ ನಡೆದಾಗ ಈ ಘಟನೆಗಳು ಸಂಭವಿಸಿರುವ ಉದಾಹರಣೆಗಳು ಅಧಿಕ. ಅಸಾಧಾರಣ ನೋವು, ಊತ, ರಕ್ತವರ್ಣತೆಯ ಪರಿಸ್ಥಿತಿಯಿದ್ದರೂ ತಕ್ಷಣ ವೈದ್ಯಕೀಯ ನೆರವು ದೊರೆತರೆ ನೂರಕ್ಕೆ ನೂರರಷ್ಟು ಗುಣಮುಖರಾಗುತ್ತಾರೆ.

ನಿಮಿರು ದೌರ್ಬಲ್ಯಕ್ಕೆ ಅಥವಾ ಎರೆಕ್ಟೈಲ್ ಡಿಸ್ ಫನ್ಕ್ಷನ್ (Erectile dysfunction) ನ   ಪ್ರಮುಖ ಕಾರಣಗಳು

ನಿಮಿರು ದೌರ್ಬಲ್ಯಕ್ಕೆ ಅಥವಾ ಎರೆಕ್ಟೈಲ್ ಡಿಸ್ ಫನ್ಕ್ಷನ್ (ED) ನ   ಪ್ರಮುಖ ಕಾರಣಗಳಲ್ಲಿ ಲಿಂಗಕ್ಕೆ ಸರಿಯಾದ ರಕ್ತ ಸಂಚಾರವಿಲ್ಲದೆ ಅಥವಾ ನರಗಳ ಸಂಪರ್ಕದಲ್ಲಿ ಅಡಚಣೆಯಿಂದ ಇರಬಹುದು. ಹಾರ್ಮೋನ್ ಗಳ ಸ್ರವಿಕೆಯಲ್ಲಿ ಅಡಚನೆಯಿಂದಲೂ ಈ ದೌರ್ಬಲ್ಯ ಉಂಟಾಗಬಹುದು. ಅತ್ಯಧಿಕ ಸಮಯ ಅಂದರೆ ನಿತ್ಯ ಬಹು ದೂರ ಸೈಕಲ್ ತುಳಿಯುವ ಪುರುಷರಲ್ಲೂ ಈ ನಿಮಿರು ದೌರ್ಬಲ್ಯ ಹೆಚ್ಚಾಗಿ ಕಂಡುಬಂದಿದೆ.

ಹೃದ್ರೋಗ, ರಕ್ತನಾಳಗಳಲ್ಲಿ ಅಡಚಣೆ, ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ಕಂಪವಾತ,ಪ್ರೊಸ್ಟೇಟ್ ವೃದ್ಧಿ, ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ, ಕಟಿ ಮತ್ತು ಮೆದುಳಬಳ್ಳಿಗೆ ಅಪಘಾತ ಅಲ್ಲದೆ ಆತಂಕ, ಖಿನ್ನತೆ ಮುಂತಾದ ಮಾನಸಿಕ ವ್ಯಾಧಿಗಳು ಮತ್ತು ಮಾನಸಿಕ ವ್ಯಾಧಿಗೆ ಸೇವಿಸುವ ಎಷ್ಟೋ ಔಷಧಿಗಳೂ ಸಹ ಈ ನಿ.ದೌ.ಕ್ಕೆ ಕಾರಣಗಳಾಗಬಹುದು.

ನಿ.ದೌ. ವನ್ನು ಆಯುರ್ವೇದ ದಲ್ಲಿ ಕ್ಲೈಭ್ಯ ಎಂದು ಕರೆದರೂ ಅದರಲ್ಲಿಯ ಪ್ರಬೇಧಗಳ ಅನುಸಾರ ಇದನ್ನು ಧ್ವಜಭಂಗ ಕ್ಲೈಭ್ಯ ಎನ್ನಬಹುದು. ಉಳಿದ ಪ್ರಭೇದಗಳೆಂದರೆ ಬೀಜೋಪಘಾತಜ ಕ್ಲೈಭ್ಯ, ಶುಕ್ರ ಕ್ಷಯಜ ಕ್ಲೈಭ್ಯ ಮತ್ತು ಜರಾಜ ಕ್ಲೈಭ್ಯ ಎಂದು. ಇನ್ನು ಕಾರಣಗಳ ಪ್ರಕಾರ ನೋಡಿದರೆ ಮಾನಸಿಕ, ಪಿತ್ತಜ, ಶುಕ್ರ ಕ್ಷಯಜ, ಮೇಡ್ರೋ ರೋಗಜ, ಉಪಘಾತಜ, ಶುಕ್ರ ಸ್ಥಂಭಜ ಮತ್ತು ಸಹಜ ಕ್ಲೈಭ್ಯ ಎಂದು ಏಳು ವಿಧಗಳಾಗಿ ವಿಂಗಡಿಸಲಾಗಿದೆ.

ನಿ.ದೌ. ಬಾರದಿರಲು ಶುದ್ಧವಾದ ಆಹಾರ ಸೇವನೆ, ಆಚಾರ ವಿಚಾರಗಳಲ್ಲೂ ನಿಯಮಪಾಲನೆ, ಋತುಚರ್ಯೆ, ದಿನಚರ್ಯೆಗಳ ಸರಿ ಪಾಲನೆ ಬಹಳ ಮುಖ್ಯ. ಲೈಂಗಿಕತೆಯಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವುದು ಸಹ ತಪ್ಪು. ಚಳಿಗಾಲದಲ್ಲಿ ಪ್ರತಿನಿತ್ಯವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಅಡ್ಡಿಯಿಲ್ಲದಿದ್ದರೂ ವಸಂತ ಮತ್ತು ಶರದ್ ಋತುಗಳಲ್ಲಿ ಮೂರು ದಿನಕ್ಕೊಮ್ಮೆಯೂ, ಗ್ರೀಷ್ಮ ಮತ್ತು  ವರ್ಷ ಋತುಗಳಲ್ಲಿ ಅಂದರೆ ಬೇಸಿಗೆ, ಮಳೆಗಾಲದ ನಾಲ್ಕೂ ತಿಂಗಳ ಅವಧಿಯಲ್ಲಿ ಶರೀರದಲ್ಲಿ ಶಕ್ತಿ ಕಡಿಮೆ ಇರುವುದರಿಂದ ಪಾಕ್ಷಿಕವಾಗಿಯೂ ಅನುಸರಿಸಬೇಕೆಂಬ ಉಲ್ಲೇಖವಿದೆ.

‘ಧರ್ಮಾರ್ಥಕಾಮಮೋಕ್ಷಾಣಾಂ ಆರೋಗ್ಯಮ್ ಮೂಲಮುತ್ತಮಮ್’ ಎಂಬ ಸೂತ್ರದಂತೆ ಚತುರ್ವಿದ ಪುರುಷಾರ್ಥಗಳನ್ನು ಸಾಧಿಸಲು ಬಹಳ ಮುಖ್ಯವಾಗಿ ಬೇಕಾದದ್ದು ಮನುಷ್ಯನ ಆರೋಗ್ಯ. ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದ ಮತ್ತು ಋತು ಪ್ರಕಾರದ ಆಹಾರ ಸೇವನೆ, ಹೆಚ್ಚಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಇನ್ನು ಈ ನಿ.ದೌ. ಉಳ್ಳವರು ಕೀಗೇಲ್ ಎಂಬ ವಿಶೇಷ ಕಟಿ ವ್ಯಾಯಾಮವನ್ನು ಮಾಡುವುದು ಉಚಿತ.

ಮಾನಸಿಕ ಕಾರಣಗಳಿಂದ ನಿ.ದೌ. ಅನುಭವಿಸುತ್ತಿರುವವರಿಗೆ ಯೋಗ,ಪ್ರಾಣಾಯಾಮ ಮತ್ತು ಧ್ಯಾನದಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ. (place) ಸ್ಥಳ ಬದಲಾವಣೆ, (position) ಸಂಭೋಗದ ಭಂಗಿಯಲ್ಲಿ ಬದಲಾವಣೆ ಮತ್ತು (partner) ಸಂಗಾತಿಯ ಬದಲಾವಣೆಯಿಂದ ಸಹ ಆಶ್ಚರ್ಯಕರ  ಸುಧಾರಣೆ ಕಂಡುಬಂದಿದೆ.

ಆಧುನಿಕ ವೈದ್ಯ ಪದ್ಧತಿಯಲ್ಲಿ ನಿ.ದೌ.ವನ್ನು ಕುರಿತು ಬಹಳ ಸಂಶೋಧನೆಗಳು ನಡೆದಿದ್ದು ಹೊಸ ಹೊಸ ಆವಿಷ್ಕಾರಗಳು ಮಾರುಕಟ್ಟೆಗೆ ಬಂದಿವೆ. ಅವುಗಳಲ್ಲಿ ಪ್ರಮುಖವಾದವು ಪಿನೈಲ್ ಪಂಪ್, ಪಿನೈಲ್ ರಿಂಗ್ ಮತ್ತು ಪಿನೈಲ್ ಇಂಪ್ಲಾಂಟ್ಸ್.

ಆಯುರ್ವೇದದಲ್ಲಿ ಶಿಲಾಜಿತು (Shilajit) , ಅಶ್ವಗಂಧ (ashwagandha ), ಮುಸಲಿ (safed musli or mushali) , ಇಕ್ಷುರ, ಗೋಕ್ಷುರ Gokshura or tribulus) , ಶತಾವರಿ (shatavari) , ಕಪಿಕಚ್ಚು (kapikacchu or mucuna ) ಮುಂತಾದ ವಾಜೀಕರ  ಗಿಡ ಮೂಲಿಕೆಗಳು ಮತ್ತು ಬೆಟ್ಟದ ನೆಲ್ಲಿಕಾಯಿಯೊಡನೆ (amla ) ಹಲವಾರು ಅಪರೂಪದ ದ್ರವ್ಯಗಳನ್ನು ಸೇರಿಸಿ ಸಿದ್ಧಪಡಿಸಿದ ವಾಜೀಕರಣ ರಸಾಯನವು ಬಹಳ ಉತ್ತಮ ಫಲಿತಾಂಶ ಕೊಟ್ಟಿರುತ್ತದೆ.

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ವಾತರಕ್ತ ( gout ), ಗೌಟಿ ಅರ್ಥ್ರೈಟಿಸ್ ರೋಗಿಗಳು ಮುಂದೆ ಕೆಲವು ವರ್ಷಗಳ ನಂತರ ಈ ನಿ.ದೌ.ಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬಂದಿರುತ್ತದೆ.

ಡಾ!ಸಿ. ಮುರಳೀಧರ.

 

 

 

 

ನಿಮ್ಮದೊಂದು ಉತ್ತರ

Close Menu