ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

ಚರಿತ್ರಾಕಾರರು ಸೋಯಾಬೀನ್ ಮೂಲ ಚೀನಾದ ಉತ್ತರ ಭಾಗ ಎಂದು ಅಭಿಪ್ರಾಯ ಪಡುತ್ತಾರೆ . ಪ್ರಸ್ತುತ ಚೀನಾದಲ್ಲಿ ಬಾರ್ಲಿ , ಅಕ್ಕಿ , ಗೋಧಿ ಮತ್ತು ನವಣೆಗಳೊಂದಿಗೆ ಸೋಯಾಬೀನನ್ನೂ ಸಹ ಪ್ರಮುಖ ಆಹಾರವಾಗಿ ಬಳಸುತ್ತಾರೆ .

ಸೋಯಾಬೀನ್ ಬಗ್ಗೆ  ಚೀನೀ ವೈದ್ಯ ಶಾಸ್ತ್ರ ಏನು ಹೇಳುತ್ತದೆ ?

soybean benefits in kannada, soya bean in kannada, soya bean ayurveda, ಸೋಯಾಬೀನ್

ಚೀನಾದ ಪುರಾತನ ವೈದ್ಯಕೀಯ ಶಾಸ್ತ್ರದಲ್ಲಿ ಕಚ್ಚಾ ಸೋಯಾಬೀನ್ ಮನುಷ್ಯರು ಉಪಯೋಗಿಸಬಾರದೆಂದೇ ಹೇಳಿದೆ. ಕಚ್ಚಾ ಸೋಯಕ್ಕಿಂತ ಹುದುಗಿಸಿ ಹುಳಿ ಬಂದಂತಹ ಸೋಯಾ ಮೇಲು ಎಂಬುದು ಅವರ ಅಭಿಪ್ರಾಯ. ಆದರೆ ಆಯುರ್ವೇದ ಶಾಸ್ತ್ರದಲ್ಲಿ ಹುದುಗಿಸಿ ಹುಳಿ ಬಂದಂತಹ ಪದಾರ್ಥಗಳನ್ನು ಉಪಯೋಗಿಸಬಾರದೆಂದೇ ಹೇಳಲಾಗುತ್ತದೆ .

ಸೋಯಾಬೀನ್ ಬಗ್ಗೆ ಆಯುರ್ವೇದ ವೈದ್ಯರ ಅಭಿಪ್ರಾಯ ಏನು ?

ಸೋಯಾಬೀನ್ ಬಗ್ಗೆ ಆಯುರ್ವೇದದಲ್ಲಿ ಯಾವುದೇ ಉಲ್ಲೇಖ ಇಲ್ಲಾ . ಆದರೂ ಇದನ್ನು ಆಯುರ್ವೇದೀಯ ತತ್ವಗಳ ಅನುಸಾರ ವಿಮರ್ಶಿಸಿದಾಗ ಈ ಅಂಶಗಳು ಕಂಡು ಬರುತ್ತವೆ .

1. ಸೋಯಾಬೀನ್ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ .
2. ಇದು ಸಾಮಾನ್ಯವಾಗಿ ಅಜೀರ್ಣ ಉಂಟು ಮಾಡಿ ‘ಆಮ ‘ ಎಂಬ ವಿಷ ಅಥವಾ body toxin ಬಿಡುಗಡೆ ಮಾಡುತ್ತದೆ .
3. ಹೀಗೆ ಬಿಡುಗಡೆಯಾದ ‘ಆಮ’ ಪುರುಷರ ಸಂತಾನ ಶಕ್ತಿಗೆ ಮಾರಕವಾಗಬಹುದು
ಆಯುರ್ವೇದದ ಪ್ರಕಾರ ಹುಳಿ ಬರೆಸಿ ತಯಾರಿಸುವ ಸೋಯಾ ಪದಾರ್ಥಗಳನ್ನೂ ಸಹ ಉಪಯೋಗಿಸುವಂತಿಲ್ಲ . ಆಯುರ್ವೇದ ಆಚಾರ್ಯರ ಪ್ರಕಾರ ಯಾವುದೇ ಆಹಾರ ಅಜೀರ್ಣ ಉಂಟು ಮಾಡಿದಾಗ ಆಹಾರದ ಸಾರ ಭಾಗ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ . ಇದರಿಂದ ದೇಹದ ಧಾತುಗಳಾದ ರಕ್ತ , ಮಾಂಸ , ಅಸ್ಥಿ , ಮಜ್ಜೆ ಹಾಗು ಶುಕ್ರ ಇವುಗಳ ಪುಷ್ಟಿಯೂ ಕುಂಠಿತವಾಗುತ್ತದೆ . ಶುಕ್ರ ಧಾತುವಿನ ಪುಷ್ಟಿಯಲ್ಲಿ ಏರುಪೇರಾದಾಗ ನಿಮಿರು ದೌರ್ಬಲ್ಯ , ಲೈಂಗಿಕ ಶಕ್ತಿ ಹ್ರಾಸ , ಸಂತಾನಹೀನತೆ ಹಾಗು ಬಲಹೀನತೆಗಳು ಕಾಣಬರುತ್ತವೆ .

ಸೋಯಾಬೀನ್ ಪುರುಷರ ಸಂತಾನ ಶಕ್ತಿಯನ್ನು ಹ್ರಾಸ ಮಾಡುತ್ತದೆಯೇ ?

ಚೀನಾದ ಆಶ್ರಮಗಳಲ್ಲಿ ಸನ್ಯಾಸಿಗಳು ತಮ್ಮ ಲೈಂಗಿಕ ಆಸೆಗಳನ್ನು ನಿಗ್ರಹಿಸಲು ಸೋಯಾಬೀನನ್ನು ಉಪಯೋಗಿಸುತ್ತಿದ್ದರು ಎಂಬ ಉಲ್ಲೇಖ ಇದೆ . ಇದರ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ . ಇವುಗಳ ಸಾರಾಂಶ ಹೀಗಿದೆ .

ಸೋಯಾ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

ಐಸೊಫ್ಲ್ಯಾವೊನ್ಸ್:

ಇವು ಸ್ತ್ರೀ ಹಾರ್ಮೋನ್ ಆದ ಈಸ್ಟ್ರೋಜೆನ್ ನನ್ನು ಅನುಕರಿಸುತ್ತವೆ. ಮೊದಲು ನಾವು ಈಸ್ಟ್ರೋಜೆನ್ ಹಾಗು ಟೆಸ್ಟೋಸ್ಟೆರಾನ್ ಬಗ್ಗೆ ತಿಳಿದುಕೊಳ್ಳೋಣ . ಈಸ್ಟ್ರೋಜೆನ್ ಒಂದು ಸ್ತ್ರೀ ಹಾರ್ಮೋನ್. ಇದು ಮಹಿಳೆಯರಲ್ಲಿ ಸ್ತ್ರೀ ಲಕ್ಷಣಗಳು ಬೆಳೆಯುವಂತೆ ನೋಡಿಕೊಳ್ಳುತ್ತದೆ.
ಟೆಸ್ಟೋಸ್ಟೆರಾನ್ ಪುರುಷ ಹಾರ್ಮೋನ್. ಇದು ಗಂಡಸರಲ್ಲಿ ಪುರುಷ ಲಕ್ಷಣಗಳು ಬೆಳೆಯುವಂತೆ ನೋಡಿಕೊಳ್ಳುತ್ತವೆ ಹಾಗು ಗಂಡಸರ ಸಂತಾನ ಶಕ್ತಿ ಹಾಗು ಲೈಂಗಿಕ ಶಕ್ತಿ  ಬಲ ಪಡಿಸುತ್ತದೆ.

ಪುರುಷರು ಸೋಯಾಬೀನ್ ಉಪಯೋಗಿಸಿದಾಗ ಐಸೊಫ್ಲ್ಯಾವೊನ್ಸ್ ಗಳು ಈಸ್ಟ್ರೋಜೆನ್ನಂತೆ ಅನುಕರಿಸುತ್ತವೆ. ಇದರಿಂದ ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಕಡಿಮೆಯಾಗಿ , ಸಂತಾನ ಶಕ್ತಿಯೂ ಕಡಿಮೆಯಾಗುತ್ತದೆ . ಇದರಿಂದ ನಿಮಿರು ದೌರ್ಬಲ್ಯ ಸಹ ಬರಬಹುದು . ಸ್ವಿಟ್ಜರ್ಲ್ಯಾಂಡ್ ನ ಒಂದು ಸಂಶೋಧನೆಯ ಪ್ರಕಾರ ೧೦೦ ಗ್ರಾಂ ಸೋಯಾದಲ್ಲಿ ಹೆಂಗಸರ ಸಂತಾನ ನಿರೋಧಕ ಒಂದು ಮಾತ್ರೆಯಲ್ಲಿರುವಷ್ಟು ಈಸ್ಟ್ರೋಜೆನ್ ನಂತಹ ಪದಾರ್ಥವು ಇರುತ್ತದೆ .

ಫೈಟೇಟ್ಸ

ಪುರುಷರಲ್ಲಿ ವೀರ್ಯಾಣುವಿನ ವೃದ್ಧಿಯಾಗಬೇಕೆಂದರೆ ಝಿನ್ಕ್ (zinc) ಅಥವಾ ಸತು , ಕಾಪರ್ (copper) ಅಥವಾ ತಾಮ್ರ , ಐರನ್ (iron) ಅಥವಾ ಕಬ್ಬಿಣ ಹಾಗು ಕ್ಯಾಲ್ಸಿಯಂ ಅಂಶಗಳು ಬೇಕಾಗುತ್ತವೆ . ಸೋಯಾಬೀನ್ ನಲ್ಲಿ ಇರುವ ಹಠಮಾರಿ ಫೈಟೇಟ್ಸಗಳು ಝಿನ್ಕ್ ಅಥವಾ ಸತು , ಕಾಪರ್ ಅಥವಾ ತಾಮ್ರ , ಐರನ್ ಅಥವಾ ಕಬ್ಬಿಣ ಹಾಗು ಕ್ಯಾಲ್ಸಿಯಂ ಅಂಶಗಳನ್ನು ಕರುಳು ಹೀರಿಕೊಳ್ಳದಂತೆ ತಡೆಯುತ್ತವೆ . ಇದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ .

ಗಾಯಿಟ್ರೋಜೆನ್ಸ್

ಸೋಯಾದಲ್ಲಿರುವ ಈ ಜೈವಿಕ ಅಣುಗಳು ಥೈರೊಯ್ಡ್ ಗ್ರಂಥಿಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ . ಇದರಿಂದ ಗಾಯಿಟರ್ ರೋಗ ಸಹ ಬರಬಹುದು . ಥೈರೊಯ್ಡ್ ಗ್ರಂಥಿಯ ಕ್ರಿಯೆಯು ಏರುಪೇರಾದಾಗ ಪುರಷರ ಸಂತಾನ ಶಕ್ತಿ ಕುಗ್ಗುತ್ತದೆ .

ಆದ್ದರಿಂದ ಕಡಿಮೆ ವೀರ್ಯಾಣುಗಳಿದ್ದಾಗ ಗಂಡಸರು ಇದನ್ನು ಉಪಯೋಗಿಸದಿರುವುದು ಒಳ್ಳೆಯದು . ಪಿ .ಸಿ ಓ ಡಿ ತೊಂದರೆಯಿಂದ ಬಳಲುತ್ತಿರುವ ಹೆಂಗಸರೂ ಸಹ ಇದನ್ನು ಉಪಯೋಗಿಸದಿರುವುದು ಒಳ್ಳೆಯದು .

ಇಮೇಲ್ – drsavithasuri@gmail.com    ವಾಟ್ಸ್ ಅಪ್ – +91 6360108663

 

ನಿಮ್ಮದೊಂದು ಉತ್ತರ

Close Menu