ಆಯುರ್ವೇದದಲ್ಲಿ ,ತೂಕ ಇಳಿಸಲು ಹಲವಾರು ಕಷಾಯಗಳನ್ನು ವಿವರಿಸಿದ್ದಾರೆ. ಇವೇ ಈಗ ಪ್ರಚಲಿತದಲ್ಲಿರುವ ಹರ್ಬಲ್ ಟೀ ಗಳು. ಇವು ದೇಹದ ಬೊಜ್ಜು ಕರಗಿಸಲು ಸಹಾಯ ಮಾಡುತ್ತವೆ. ಇವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ದೇಹದ ತೂಕ ಇಳಿಸಲು ಆಯುರ್ವೇದ ಹರ್ಬಲ್ ಟೀಗಳು ( Englis Article Five Effective Ayurvedic Tea Recipes for Weight Loss )
ಗ್ರೀನ್ ಟೀ , ನಿಂಬೆ ಹಣ್ಣು ಹಾಗೂ ಜೇನುತುಪ್ಪ
ಗ್ರೀನ್ ಟೀ ದೇಹಕ್ಕೆ ಎಕ್ಸಿಡೆಂಟ್ ಗಳನ್ನು ಸರಬರಾಜು ಮಾಡುತ್ತದೆ ಎಂಬುವ ಅಂಶ ಹಲವಾರು ಸಂಶೋಧನೆಗಳಿಂದ ತಿಳಿದು ಬಂದಿದೆ. ಆಂಟಿ ಎಕ್ಸಿಡೆಂಟ್ ಎಂದರೆ – ದೇಹವು ಆಹಾರವನ್ನು ಪಚನ ಮಾಡುವಾಗ, ಕಲುಷಿತ ಗಾಳಿಯನ್ನು ನಾವು ಉಸಿರಾಡಿಸಿದಾಗ ಅನೇಕ ವಿಷಯುಕ್ತ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಆಂಟಿಎಕ್ಸಿಡೆಂಟ್ ಈ ರಾಸಾಯನಿಕಗಳನ್ನು ತಟಸ್ಥಗೊಳಿಸಿ , ಅವುಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಆಂಟಿ ಎಕ್ಸಿಡೆಂಟ್ ಗಳು ದೇಹದ ತೂಕವನ್ನೂ ಸಹ ಕಡಿಮೆಮಾಡುತ್ತವೆ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ರಕ್ಷಿಸುತ್ತದೆ. ಆಯುರ್ವೇದದ ಪ್ರಕಾರ ಜೇನುತುಪ್ಪ ತೂಕ ಇಳಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದು ಮೆಧೋ ಧಾತು ಅಥವಾ ಕೊಬ್ಬನ್ನು ಕರಗಿಸುತ್ತದೆ.
ಗ್ರೀನ್ ಟೀ ಮಾಡುವ ವಿಧಾನ
ಒಂದು ಕಪ್ ನೀರನ್ನು ಕುದಿಸಿ ಅದರಲ್ಲಿ ಒಂದು ಚಮಚ ಗ್ರೀನ್ ಟೀ ಹಾಕಿ ಮುಚ್ಚಿಡಿ. ಸ್ವಲ್ಪ ಉಗುರು ಬೆಚ್ಚಗಾದ ನಂತರ ಅದಕ್ಕೆ ಒಂದು ಟೀ ಚಮಚ ಲಿಂಬೆ ರಸ ಹಾಗೂ ಒಂದು ಟೀ ಚಮಚ ಜೇನುತುಪ್ಪ ಬೆರೆಸಿ ಸೋಸಿ , ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಚಕ್ಕೆ ಅಥವಾ ದಾಲ್ಚಿನ್ನಿ ಟೀ.
ಚಕ್ಕೆ ಅಥವಾ ದಾಲ್ಚಿನೀಯನ್ನು ಸರ್ವೇ ಸಾಮಾನ್ಯ ಎಲ್ಲರೂ ಉಪಯೋಗಿಸುತ್ತಾರೆ. ಇದು ಆಹಾರದ ಸ್ವಾದ ಹಾಗೂ ಪರಿಮಳ ಹೆಚ್ಚಿಸುತ್ತದೆ. ಇತ್ತೀಚಿನ ಹಲವಾರು ಸಂಶೋಧನೆಗಳು ಈ ಸಂಬಾರ ಪದಾರ್ಥವು ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುವುದನ್ನು ತೋರಿಸುತ್ತಿವೆ. ಆಯುರ್ವೇದ ವೈದ್ಯರು ಹಾಗೂ ಪ್ರಕೃತಿ ಚಿಕಿತ್ಸಕರೂ ಸಹ ಇದೆ ಅಭಿಪ್ರಾಯ ಹೊಂದಿದ್ದಾರೆ. ದಾಲ್ಚಿನಿಯಲ್ಲಿ ಸಿಲೋನ್ ದಾಲ್ಚಿನೀ ಅಥವಾ ಶ್ರೀಲಂಕಾ ದಾಲ್ಚಿನೀ ಬಹಳ ಉತ್ತಮವಾದದ್ದು. ಇದೇ ಔಷಧೀಯ ಬಳಕೆಗೆ ಪ್ರಶಸ್ತವಾದದ್ದು.
ಚಕ್ಕೆ ಅಥವಾ ದಾಲ್ಚಿನೀ ಟೀ ಮಾಡುವ ವಿಧಾನ
2 ಕಪ್ ನೀರಿಗೆ 3 ಇಂಚಿನಷ್ಟು ದಾಲ್ಚಿನಿಯನ್ನು ಮುರಿದು ಹಾಕಿ. ಈ ನೀರನ್ನು ಕುದಿಸಿ. ನೀರು 1 ಕಪ್ ಅಷ್ಟು ಕಡಿಮೆ ಆದ ಮೇಲೆ ಸ್ಟೋವ್ ಆರಿಸಿ. ಇದು ಸ್ವಲ್ಪ ಉಗುರು ಬೆಚ್ಚಗಾದನಂತರ ಅರ್ಧ ನಿಂಬೆ ಹಣ್ಣು ಹಿಂಡಿ, ಒಂದು ಚಮಚ ಜೇನುತುಪ್ಪ ಸೇರಿಸಿ ಸೋಸಿ ಕುಡಿಯಿರಿ. ಇದರಿಂದ ದೇಹದ ತೂಕ ಬೇಗನೆ ಕಡಿಮೆಯಾಗುತ್ತದೆ. ಇದನ್ನು ಶೀತ ಹಾಗೂ ಕೆಮ್ಮು ಕಡಿಮೆ ಮಾಡುತ್ತದೆ.
ಎಚ್ಚರಿಕೆ ಸಲಹೆಗಳು
ಡಯಾಬಿಟಿಸ್ ತೊಂದರೆ ಇರುವವರು ತೂಕ ಕಡಿಮೆ ಮಾಡಿಕೊಳ್ಳಬೇಕಿದ್ದರೇ ಜೇನುತುಪ್ಪ ಉಪಯೋಗಿಸ ಬಾರದು.
ಪುರುಷರಿಗೆ ದೇಹದ ತೂಕ ಹೆಚ್ಚಿದ್ದರೆ ನಿಮಿರು ದೌರ್ಬಲ್ಯ ಹಾಗೂ ನಿದ್ರಾಹೀನತೆ ಕಾಣಿಸಿಕೊಳ್ಳಬಹುದು. ಮೇಲೆ ತಿಳಿಸಿದ ಹರ್ಬಲ್ ಟೀ ಗಳ ಉಪಯೋಗದಿಂದ ದೇಹದ ತೂಕ ಕಡಿಮೆಯಾಗುವುದಲ್ಲದೆ ಲೈಂಗಿಕ ಶಕ್ತಿಯೂ ಹೆಚ್ಚುವುದು.
ಮಹಿಳೆಯರಲ್ಲಿ ದೇಹದ ತೂಕ ಹೆಚ್ಚಾದಾಗ ತಿಂಗಳ ಮುಟ್ಟಿನ ಚಕ್ರವೂ ಏರುಪೇರಾಗುತ್ತದೆ. ಅಲ್ಲದೆ ಇದರಿಂದ ಪಿ ಸಿ ಓ ಡಿ ಸಹ ಬರಬಹುದು. ಈ ಎರಡು ಸಮಸ್ಯೆಗಳಿಗೂ ಮೇಲಿನ ಹರ್ಬಲ್ ಟೀಗಳು ಬಹಳ ಉಪಯುಕ್ತವಾದವು.
ಈ ಹರ್ಬಲ್ ಟೀಗಳನ್ನು ಉಪಯೋಗಿಸುವುದರ ಜೊತೆಗೆ ವ್ಯಾಯಾಮ, ವಾಕಿಂಗ್ ಹಾಗೂ ಹಿತಮಿತವಾದ ಸಂತುಲಿತ ಆಹಾರ ಸೇವನೆ ಇವನ್ನೂ ಸಹ ರೂಢಿಸಿಕೊಳ್ಳಬೇಕು.
BUY AYURVEDIC HERBAL TEA FOR WEIGHT LOSS
NILOBESE AYURVEDIC TEA |
WEIGHT REDUCTION KIT |
TRIM FIT AYURVEDIC WEIGHT MANAGEMENT COMBO |
AYURVEDIC WEIGHT MANAGEMENT COMBO |
Free Ayurvedic Consultation
Call us at +91 9945995660 / +91 9448433911
Whats App + 91 6360108663/